4 ವರ್ಷದ ಬಾಲಕಿ ಮೇಲೆ ಶಾಲೆಯಲ್ಲೇ ರೇಪ್ - ಮುಂಬಾಯಿಯಲ್ಲಿ ಭಯಾನಕ ಘಟನೆ

og:image
ಮುಂಬಯಿ:  ಗೋವಿಂದ ನಗರದಲ್ಲಿರುವ ಮುಂಬೈನ ಮಲಾದ್ ಪ್ರದೇಶದ ಶಾಲೆಯ ಹೊರಗೆ ಬೃಹತ್ ಪ್ರತಿಭಟನೆ ನಡೆದಿವೆ.  4 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಳಾಗಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.

ಉದ್ರಿಕ್ತ ಪೋಷಕರು ಮಲಾಡ್ ಬಲಿ ಇರುವ ಸೇಥ್ ಜುಗ್ಗಿಲಾಲ್ ಪೋಡರ್ ಅಕಾಡೆಮಿ (ಎಸ್.ಜೆ. ಪಿ ) ಶಾಲೆಯ ಮುಂದೆ ನೆರೆದಿದ್ದಾರೆ  ಮತ್ತು ಜಾಗ ಬಿಡುವ ಮನಸ್ಥಿತಿಯಲ್ಲಿ ಇಲ್ಲ.

ಪಿಯೋನ್ ಅತ್ಯಾಚಾರದ ಅರೋಪಿಯಾಗಿದ್ದು ಅವನ ಹೆಸರನ್ನು ಬಹಿರಂಗಪಡಿಸಲಾಗಿಲ್ಲ ಮತ್ತು ಶಾಲಾ ಅಧಿಕಾರಿಗಳು ಇನ್ನೂ ಆರೋಪವದ ಬಗ್ಗೆ ಕಾಮೆಂಟ್ ಮಾಡಿಲ್ಲ.

ಪೊಲೀಸರು ಶಾಲೆಯ ಶೌಚಾಲಯದಲ್ಲಿ ೪ ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಅರೋಪದ ಮೇಲೆ ಶಾಲೆಯ ಪಿಯೋನ್ ನನ್ನು ಬಂಧಿಸಿದ್ದಾರೆ ಎಂದು ಹೊಸ ವರದಿಗಳು ತಿಳಿಸಿವೆ.
ಆರೋಪಿಯನ್ನು  ಆಗಸ್ಟ್ 11 ರ ವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ,. ನಂತರ ದೃಢೀಕರಣದ ನಂತರ ಮುಂದಿನ ಹಂತಗಳನ್ನು ತೆಗೆದುಕೊಳ್ಳಲಾಗುವುದು.
Previous Post Next Post