'ಬ್ಲೂ ವೇಲ್" ಗೆ ರಾಜ್ಯದಲ್ಲಿ ಮೊದಲ 'ಬಲಿ' ಬೆರಳು ಕತ್ತರಿಸಿದ ಹುಡುಗಿ - ಜಾಗರೂಕರಾಗಿ

og:image
ಹುಬ್ಬಳ್ಳಿ, ಆಗಸ್ಟ್ 25: ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿನಿ ಗುರುವಾರ, ಆಗಸ್ಟ್ 24 ರಂದು ತನ್ನ ಬೆರಳನ್ನು ತಾನೇ ಕಟ್ ಮಾಡಿದ್ದು, ಬ್ಲೂ ವ್ಹೇಲ್ ನ ಅಣತಿಯಂತೆ ಈ ರೀತಿ ಮಾಡಿದ್ದು ತಿಳಿದು ಬಂದಿದೆ. ಬ್ಲೂ ವೇಲ್ ಆಟದ ಹಾವಳಿ ಭಾರತವನ್ನೂ ನಿಧಾನವಾಗಿ ವ್ಯಾಪಿಸುತ್ತಿದ್ದು, ಇದು ರಾಜ್ಯದಿಂದ ವರದಿಯಾದ ಈ ರೀತಿಯ ಮೊದಲ ಘಟನೆಯಾಗಿದೆ.

ಎ 6 ನೇ ತರಗತಿಯ ಹುಡುಗಿ ತನ್ನ ಶಾಲಾ ಸ್ನೇಹಿತೆಯರಿಗೆ ತಾನು ಆಟವಾಡುವಾಗ ತನ್ನ ಬೆರಳನ್ನು ಕತ್ತರಿಸಿರುವುದಾಗಿ ಹೇಳಿದಳು. ತಕ್ಷಣವೇ ಆಕೆಯ ಸ್ನೇಹಿತರು ಶಾಲೆಯಲ್ಲಿ ಶಿಕ್ಷಕರು ಇದರ ಬಗ್ಗೆ ತಿಳಿಸಿದರು. ಶಿಕ್ಷಕರ ಬಳಿ ಹುಡುಗಿ, ತಾನು ತನ್ನ ಮನೆಯಲ್ಲಿ ಬ್ಲೂವೇಲ್ ಆಟ ಆಡುವಾಗ ತನ್ನ ಬೆರಳನ್ನು ಕತ್ತರಿಸಿರುವುದಾಗಿ ಒಪ್ಪಿಕೊಂಡಿದ್ದಾಳೆಂದು ಶಿಕ್ಷಕರು ಹೇಳಿದ್ದಾರೆ. ಹುಡುಗಿ ತನ್ನ ತಂದೆಯ ಸ್ಮಾರ್ಟ್ಫೋನ್ನಲ್ಲಿ ಡೌನ್ಲೋಡ್ ಮಾಡಿದ ನಂತರ ಬ್ಲೂ ವೇಲ್ ಆಟವಾಡುತ್ತಿದ್ದಳು ಎಂದು ಶಿಕ್ಷಕರಿಗೆ ತಿಳಿಸಿದರು.

"ನಮಗೆ ಈ ವಿಷಯ ತಿಳಿದಿದ್ದು, ಈ ಸಮಸ್ಯೆ ಮಿತಿ ಮೀರಿ ಮಾಧ್ಯಮದ ಗಮನ ಸೆಳೆಯುವು ಇಷ್ಟ ವಿರಲಿಲ್ಲ, ಆದರಿಂದ ಆಕೆಗೆ ಮನೆಗೆ ಹಿಂದಿರುಗಿದ ತಕ್ಷಣ ಆಟವನ್ನು ಮೊಬೈಲ್ ನಿಂದ ತೆಗೆಯಲು ನಾವು ಅವರನ್ನು ಕೇಳಿದೆವು" ಎಂದು ಶಿಕ್ಷಕರು ಹೇಳಿದರು.

ಇದನ್ನೂ ಓದಿಃ 9 ವರ್ಷದ ಬಾಲಕಿ ಮೇಲೆ 13 ವರ್ಷದ ಬಾಲಕನಿಂದ ರೇಪ್ - ಭಯಾನಕ ಘಟನೆ 

ಅವಳು ಕಲಿಯುತ್ತಿರುವ ಶಾಲೆಯ ಮಹಿಳಾ ಶಿಕ್ಷಕಿ ಆ ಹುಡುಗಿನ್ನು ಮಾತಾಡಿಸಿ ಅವಳಿಗೆ ಅಂತಹ ಯಾವುದೇ ಆಟ ಆಟವಾಡಬಾರದೆಂದು ಮನವರಿಕೆ ಮಾಡಿಕೊಂಡರು.

"ಹೆತ್ತವರ ಬೇಜವಾಬ್ದಾರಿಯ ಕಾರಣದಿಂದ ಮಕ್ಕಳು ಇಂತಹ ಆಟಗಳನ್ನು ಆಡುತ್ತಾರೆ. ಈ ನಿಟ್ಟಿನಲ್ಲಿ ಪೋಷಕರ ಸಭೆಯನ್ನು ಶೀಘ್ರದಲ್ಲೇ ಕರೆಯಲಾಗುವುದು ಮತ್ತು ಅವರ ಮಕ್ಕಳ ಆರೈಕೆಗಾಗಿ ನಿರ್ದೇಶನಗಳನ್ನು ನೀಡಲಾಗುವುದು "ಎಂದು ಶಾಲೆಯ ಮ್ಯಾನೇಜಮೆಂಟ್ ತಿಳಿಸಿದೆ.

ಬ್ಲೂ ವೇಲ್ ಆಟದ ಬಗ್ಗೆ ಓದುಗರಾದ ನಮಗೆ ಕೆಲವು ಜವಬ್ದಾರಿಗಳಿದ್ದು, ಜನರಿಗೆ ಈ ಹುಚ್ಚಾಟದ ಬಗ್ಗೆ ಮನವರಿಕೆ ಮಾಡಬೇಕಿದೆ. ಇಲ್ಲದಿದ್ದರೆ ಮಕ್ಕಳು ಈ ಮಾರಿಗೆ ಬಲಿಯಾಗಿ ಪ್ರಾಣ ಕಳೆದು ಕೊಳ್ಳುವ ಮಟ್ಟಕ್ಕೆ ಅಪಾಯಕಾರಿ ಈ ಗೇಮ್.

ಇತ್ತೀಚೆಗೆ "ಬ್ಲೂ ವ್ಹೇಲ್" ಸೂಚನೆಯಂತೆ ಆತ್ಮಹತ್ಯೆ ಮಾಡಿದ ಕೇರಳದ ಮನೋಜ್ - ಈ ವಿಷಯದ ಬಗ್ಗೆ ನೇರ ನ್ಯೂಸ್ ವರದಿ ಮಾಡಿತ್ತು. ಇದನ್ನು ಇಲ್ಲಿ ಓದಿ.

ದಯವಿಟ್ಟು ಈ ನ್ಯೂಸ್ ಅನ್ನು ನಿಮ್ಮ ಫೇಸ್ ಬುಕ್ ಮತ್ತು ವಾಟ್ಸಾಪ್ ಮೂಲಕ ಶೇರ್ ಮಾಡಿ ಜನರನ್ನು ಈ ವಿಷಯದ ಬಗ್ಗೆ ಮನವರಿಕೆ ಮಾಡಿ. ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: blue whale game girl cut her finger playing the game. share this news blue whale । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.
Previous Post Next Post