ಜಾಸ್ತಿ ಮಾರ್ಕ್ಸ್ ಪಡೆದ ಹುಡುಗಿಯ ನೀರಿನ ಬಾಟಲಿಗೆ ವಿಷ ಹಾಕಿದ ಹುಡುಗಿ

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image
ಸಟ್ಣಾಃ ಮಧ್ಯಪ್ರದೇಶದ ಸಟ್ನಾದಲ್ಲಿ 8ನೇ ಕ್ಲಾಸ್ ವಿದ್ಯಾರ್ಥಿನಿ, ತನ್ನ ಸಹಪಾಠಿಯ ನೀರಿನ ಬಾಟಲಿಯಲ್ಲಿ ಸೊಳ್ಳೆಯನ್ನು ನಿರೋಧಿಸುವ ದ್ರಾವಣ ಸೇರಿಸಿ ಅವಳನ್ನು ಕೊಲೆಗೈಯಲು ಪ್ರಯತ್ನಿಸಿದ ಘಟನೆ ನಡೆದಿದೆ. ತನ್ನ ಸಹಪಾಠಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದುಕೊಳ್ಳವುದನ್ನು ಕಂಡು ಅಸೂಯೆಪಡಿರುವ ಆಕೆ ಈ ಕಾರ್ಯ ಮಾಡಿದ್ದಾಳೆ. ಆಮೇಲೆ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆಂದು ತಿಳಿದ ಆರೋಪಿ ಹುಡುಗಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾರೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ನಗರದಲ್ಲಿ ಖಾಸಗಿ ಶಾಲೆಯೊಂದರಲ್ಲಿ ಸೋಮವಾರ ತನ್ನ ಸಹಪಾಠಿಯ ನೀರಿನ ಬಾಟಲಿಗೆ ದ್ರವರೂಪದ ಸೊಳ್ಳೆಯನ್ನು ನಿರೋಧಿಸುವ ದ್ರಾವಣ ಸೇರಿಸಿದ್ದಳು. ಇದರ ಅರಿವಿಲ್ಲದ ಹುಡುಗಿ, ತನ್ನ ಬಾಟಲಿಯಿಂದ ನೀರು ಕುಡಿದ ನಂತರ ಅವಳ ಅರೋಗ್ಯದಲ್ಲಿ ಏರುಪೇರಾಗಿ ವಾಂತಿ ಮಾಡಲಾರಂಭಿಸಿದಳು. ಆಕೆಯನ್ನು ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವಳು ಚಿಕಿತ್ಸೆಯಲ್ಲಿ ಪಡೆಯುತ್ತಿದ್ದು, ಈಗ ಅರೋಗ್ಯ ಸ್ಥಿರವಾಗಿರುವುದಾಗಿ ವರದಿಯಾಗಿದೆ ಎಂದು ಸಿವಿಲ್ ಲೈನ್ಸ್ ಪೋಲಿಸ್ ಸ್ಟೇಶನ್ ಇನ್-ಚಾರ್ಜ್ ಭೂಪೇಂದ್ರ ಸಿಂಗ್ ಹೇಳಿದರು.

"ತರಗತಿಯ ಸಿ.ಸಿ.ಟಿ.ವಿ ಯಲ್ಲಿ, ಆರೋಪಿ ಹುಡುಗಿ ತನ್ನ ಸಹಪಾಠಿಯ ನೀರಿನ ಬಾಟಲಿಯಲ್ಲಿ ಸೊಳ್ಳೆ ನಿರೋಧಕ ದ್ರಾವಣವನ್ನು ಸುರಿಯುತ್ತಿರುವುದು ದಾಖಲೆಯಾಗಿದೆ ಮತ್ತು ಅದರ ಬಾಟಲ್ ಅನ್ನು ಇನ್ನೊಬ್ಬ ವಿದ್ಯಾರ್ಥಿನಿಯ ಚೀಲದಲ್ಲಿ ಅಡಗಿಸಿಟ್ಟಿದ್ದಳು" ಎಂದು ಸಿಂಗ್ ಹೇಳಿದರು.

ಏತನ್ಮಧ್ಯೆ, ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಭಯಗೊಂಡಿರುವ ಅರೋಪಿ, ಮಂಗಳವಾರ ನಗರದ ಆಕೆಯ ಮನೆಯೊಂದರಲ್ಲಿ ಸೊಳ್ಳೆ ನಿವಾರಕ ಸೇವಿಸುವ ಮೂಲಕ ಆತ್ಮಹತ್ಯೆಗೆ ಯತ್ನಿಸಿದಳು. ಜಿಲ್ಲೆಯ ಆಸ್ಪತ್ರೆಯಲ್ಲಿ ಹುಡುಗಿಯನ್ನು ದಾಖಲು ಮಾಡಿದ್ದು, ವೈದ್ಯರು ಆರೋಪಿಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.


ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News