"ಗಣೇಶ ಕೇಳಿಸಿಕೊಳ್ಳದೇ ಇರುವಾಗ, ಪ್ರಾರ್ಥಿಸುದರ ಅರ್ಥ ಏನು?" ಅಂದವರಿಗೆ ಮಹಿಳೆಯಿಂದ ಮಂಗಳಾರತಿ

og:image
ಮುಂಬಯಿಃ ಪ್ರತೀ ಭಾರಿ ಗಣೇಶ ಚತುರ್ಥಿ, ಕ್ರಷ್ಣ ಅಷ್ಟಮಿ, ದೀಪಾವಳಿ ಬಂದರೆ ಸಾಕು, ಭಾರತದಲ್ಲಿ ಸ್ವಯಂ ಘೋಷಿತ ಸೆಕ್ಯುಲರ್ ಪಂಡಿತರು ಪರಿಸರವಾದಿಗಳಾಗುತ್ತಾರೆ. ಏನಾದರೂ ಒಂದು ಕಮೆಂಟ್, ಪೋಸ್ಟ್ ಹಾಕಿದರೆ, ಜನರು ನಮ್ಮ ಬಗ್ಗೆ ಮಾತನಾಡುತ್ತಾರೆ, ಇದರಿಂದ ಬಿಟ್ಟಿ ಪಬ್ಲಿಸಿಟಿ ಸಿಗುತ್ತೆ ಎಂಬ ಭ್ರಮೆಯಲ್ಲಿ ಏನೇನೋ ಒದರಲು ಪ್ರಾರಂಭಿಸುತ್ತಾರೆ. ಅದರಿಂದ ಅವರಿಗೆ ಪಬ್ಲಿಸಿಟಿ ಎಷ್ಟು ಸಿಗುತ್ತೋ ಗೊತ್ತಿಲ್ಲ, ಆದರೆ ಮಂಗಳಾರತಿಯಂತೂ ಗ್ಯಾರಂಟಿ ಸಿಗುತ್ತದೆ.

ಇದನ್ನೂ ಓದಿ ಃ ಬ್ಯುಸಿ ಮಾರ್ಕೆಟ್ ನಲ್ಲಿ ಹುಡುಗಿ ಕೈ ಕಡಿದ ಯುವಕ - ಶಾಕಿಂಗ್ ನ್ಯೂಸ್

ಇಂತಹುದೇ ಘಟನೆ ಮಹಾನಗರಿ ಮುಂಬಾಯಿಯಲ್ಲಿ ನಡೆಯಿತು, ಇನ್ನೇನು ಗಣೇಶೋತ್ಸವ ಬಂತು, ಗಣೇಶೋತ್ಸವ ಅಂದರೆ ಭಜನೆ, ಪೂಜೆ, ಮೈಕ್ ಅಂತ ಹೇಳಿ ಸ್ಪಲ್ಪ ಸೌಂಡ್ ಆಗೋದು ಖಂಡಿತ. ಅದನ್ನೇ ನೆಪಮಾಡಿಕೊಂಡು ಮುಂಬಯಿ ಪೋಲಿಸ್, ತನ್ನ ಟ್ವಿಟ್ಟರ್ ನಲ್ಲಿ ಈ ರೀತಿ ಒಂದು ಪೋಸ್ಟ್ ಹಾಕಿದೆ.

"ಶಬ್ದ ಮಾಲಿನ್ಯ ಯಾರನ್ನೂ ಖುಶಿಪಡಿಸಲ್ಲ, ಹಾಗಿರುವಾಗ ಅವನು (ದೇವರು) ಕೇಳಿಸಿಕೊಳ್ಳದೇ ಇರುವಾಗ, ಅವನನ್ನು (ಜೋರಾದ ಶಬ್ದದಿಂದ) ಪೂಜಿಸುವುದಕ್ಕೆ ಅರ್ಥ ಏನಿದೆ?" ಎಂದು ಮುಂಬಾಯಿ ಪೊಲೀಸ್ ಟ್ವಿಟ್ಟರ್ ನಲ್ಲಿ ಹಾಕಿದ್ದರು. ಇದರಿಂದ ಹಿಂದೂಗಳಿಗೆ ಬೇಸರವಾಗುತ್ತದೆ ಎಂದು ಅರಿವಿದ್ದರೂ, ಈ ರೀತಿ ಪೋಸ್ಟ್ ಯಾಕೆ ಹಾಕಿದ್ದಾರೋ ಗೊತ್ತಿಲ್ಲ.

ಇದನ್ನೂ ಓದಿ ಃ ಮಹಾನದಿ ಧಾರಾವಾಹಿಯ ನಟಿ ರಚನಾ ಭೀಕರ ಅಪಘಾತಕ್ಕೆ ಬಲಿ - ವಿಡಿಯೋ

ಇದಕ್ಕೆ ಖಾರವಾಗಿ ಪ್ರತಿಕ್ರಿಯಿಸಿರುವ ಅಸೀಮಾ ಸಿಂಗ್, "ಗಣಪತಿ ಬರೋದು ವರ್ಷದಲ್ಲಿ ಒಮ್ಮೆ, ಆದರೆ ದಿನಕ್ಕೆ ೫ ಭಾರಿಯಂತೆ ೩೬೫ ದಿನವೂ ಲೌಡ್ ಸ್ಪೀಕರ್ ಹಾಕಿ ಪ್ರಾರ್ಥಿಸುವುದರ ಬಗ್ಗೆ ಏನಂತೀರಿ" ಎಂದು ಪ್ರಶ್ನಿಸಿದ್ದಾರೆ.

ಭಾರತಮಾತೆಯ ಮಕ್ಕಳಂತೆ ಎಲ್ಲಾ ಜಾತಿಯವರು ಜೀವಿಸಿದರೆ ಮಾತ್ರ ಅದು ಸೆಕ್ಯುಲರ್ ಎನಿಸಿಕೊಳ್ಳುವುದು, ಅದನ್ನು ಬಿಟ್ಟು ಒಬ್ಬನನ್ನು ಜಾಸ್ತಿ ಮುದ್ದು ಮಾಡುವುದು, ಇನ್ನೊಬ್ಬ ಮಾಡಿದ್ದರೆಲ್ಲಾ ತಪ್ಪು ಕಂಡು ಹಿಡಿದರೆ, ಹೀಗೆಯೇ ಎದುರುತ್ತರ ಎದುರಿಸಬೇಕಾಗುತ್ತೆ.

ಈ ನ್ಯೂಸ್ ಶೇರ್ ಮಾಡಲು ಈಗ ನೇರನ್ಯೂಸ್ ಸುಲಭವಾದ ವ್ಯವಸ್ಥೆ ಮಾಡಿದ್ದು, ನೀವು ಈ ಪುಟದ ಕೆಳಗಡೆ ಇರುವ ವಾಟ್ಸಾಪ್ ಅಥವಾ ಫೇಸ್ ಬುಕ್ ನ ಬಟನ್ ಪ್ರೆಸ್ ಮಾಡಿದರೆ ಸಾಕು, ಈಗಲೇ ಶೇರ್ ಮಾಡಿ ಎಲ್ಲರಿಗೂ ಈ ನ್ಯೂಸ್ ಬಗ್ಗೆ ತಿಳಿಸಿ.
English Summary: Mumbai Police Says no sound on Ganesh Festival.  । NeraNews.com is a leading Kannada daily news websites, with latest updates from Politics, Sports, Crime, Science, Health, Latest Movie update, Matrimonial and other entertaining stories around the world. We have daily 20,000 page visitors.