ಏಲ್ಲಾ ಅಂದುಕೊಂಡಂತೆ ಆಗಿದ್ದರೆ, ನಾಳೆ ಕೆಜಿಎಫ಼್ ಚಿತ್ರದ ಟೀಸರ್ ಯಶ್ ಅವರಿಗೆ ಹುಟ್ಟುಹಬ್ಬದ ವಿಶ್ ಜೊತೆ ಟ್ರೆಂಡ್ ಆಗಬೇಕಿತ್ತು. ಆದರೆ ನಡೆದದ್ದೇ ಬೇರೆ.
ನಾಳೆ ಬಿಡುಗಡೆಯಾಗ ಬೇಕಿದ್ದ ಟೀಸರ್ ಇವತ್ತೇ ಲೀಕ್ ಆಗಿತ್ತು. ಸುಮಾರು ಎಂಟು ಗಂಟೆ ಹೊತ್ತಿಗೆ ಎಲ್ಲಾ ಕನ್ನಡ ಚಿತ್ರಪ್ರೇಮಿಗಳ ಮೊಬೈಲ್ನಲ್ಲಿ ವಾಟ್ಸಾಪ್ ಮತ್ತು ಸೋಷಿಯಲ್ ಮೀಡಿಯಾದಲ್ಲಿ ಕೆಜಿಎಫ಼್ ಟೀಸರ್ ಹರಿದಾಡ ತೊಡಗಿತ್ತು.
ಇದರಿಂದಾಗಿ ನಾಳೆ ಬಿಡುಗಡೆಯಾಗ ಬೇಕಿದ್ದ ಟೀಸರ್ ಇವತ್ತೇ ಬಿಡುಗಡೆಗೊಳಿಸಲು ನಿರ್ಧರಿಸಿದ ಹೊಂಬಾಳೆ ಚಿತ್ರತಂಡ, ಯೂಟ್ಯೂಬ್ ಮೂಲಕ ಹರಿಬಿಟ್ಟಿದೆ. ಬಿಡುಗಡೆಯಾದ ನಿಮಿಷದಲ್ಲೇ ಲಕ್ಷಗಟ್ಟಲೆ ವೀವ್ಸ್ ಪಡೆದು ಮುನ್ನುಗುತ್ತಿರುವ ಚಿತ್ರದ ಟೀಸರ್, ಯಶ್ ಗೆ ಒಂದು ದಿನದ ಮುಂಚೆಯೇ ಹುಟ್ಟಿದ ಹಬ್ಬ ಖುಷಿ ನೀಡಿದೆ.
Tags:
Entertainment