#BoycottKareenaKhan ಕರೀನಾ ಮೇಲೆ ನೆಟ್ಟಿಗರು ಗರಂ - ಕಾರಣ ಇಲ್ಲಿದೆ ಓದಿ.

Admin
og:image

ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಟ್ವಿಟ್ಟರ್ ನಲ್ಲಿ ಟ್ರೆಂಡ್ ಆಗ್ತಾ ಇದ್ದಾರೆ, ಆದರೆ ಈ ಬಾರಿ ಯಾವುದೇ ಪಾಸಿಟಿವ್ ಸುದ್ದಿಗಳಿಗೆ ಅಲ್ಲ. ಬಾಲಿವುಡ್ ನಲ್ಲಿ ತಯಾರಾಗುತ್ತಿರುವ ಚಿತ್ರವೊಂದರಲ್ಲಿ ಸೀತೆಯ ಪಾತ್ರ ಮಾಡಲು ಕರೀನಾ  12 ಕೋಟಿ ರೂ.  ಡಿಮಾಂಡ್ ಮಾಡಿದಕ್ಕಾಗಿ, ಕರೀನಾ ಟ್ರೆಂಡ್ ಆಗ್ತಾ ಇದ್ದಾರೆ. 

ಕೆಲವು ದಿನಗಳ ಹಿಂದೆ, ಬಾಲಿವುಡ್ ಹಂಗಾಮಾದ ವರದಿಯ ಪ್ರಕಾರ, ಕರೀನಾ ಸೀತಾ ಪಾತ್ರ ನಿರ್ವಹಿಸಲು ತನ್ನ ಶುಲ್ಕವನ್ನು ಹೆಚ್ಚಿಸಿದ್ದಾಳೆ. ಅಲೌಕಿಕ್ ದೇಸಾಯಿ ನಿರ್ದೇಶನದ ಹೊಸ ಚಿತ್ರವೊಂದರಲ್ಲಿ,  ಸೀತಾ ದೃಷ್ಟಿಕೋನದಿಂದ ಮಹಾಕಾವ್ಯ ರಾಮಾಯಣವನ್ನು ಪುನಃ ಹೇಳುವ ಪ್ರಯತ್ನ ನಡೆಯಲಿಗೆ. ಇದರಲ್ಲಿ ಸೀತೆಯ ಪಾತ್ರ ಮಾಡಲು ಕರೀನಾ ಕಪೂರ್ ಚಲನಚಿತ್ರ ನಿರ್ಮಾಪಕರ ಮೊದಲ ಆಯ್ಕೆಯಾಗಿದೆ ಎಂದು ವರದಿ ಹೇಳಿದೆ.

ಮೂಲವೊಂದರ ಪ್ರಕಾರ, ಕರೀನಾ ಪ್ರತಿ ಚಿತ್ರಕ್ಕೂ 6 ರಿಂದ 8 ಕೋಟಿ ರೂ.ಗಳಷ್ಟು ಶುಲ್ಕ ಪಡೆಯುತ್ತಿದ್ದರೂ, ಈ ರಾಮಾಯಣ ಆಧಾರಿತ ಚಿತ್ರಕ್ಕೆ  ಅವರು 12 ಕೋಟಿ ರೂ. ಡಿಮಾಂಡ್ ಮಾಡಿದ್ದರು.  ಈ ಚಲನಚಿತ್ರಕ್ಕಾಗಿ ಕರೀನಾ ಕಪೂರ್  ಕನಿಷ್ಠ 8 ರಿಂದ 10 ತಿಂಗಳ ಪ್ರಾಥಮಿಕ ಅಭ್ಯಾಸ ಮತ್ತು ಶೂಟಿಂಗ್ ಸಮಯ ಮೀಸಲಿಡಬೇಕಾಗುತ್ತದೆ. 

ಇನ್ನು ಕರೀನಾ ಕಪೂರ್ ವೀರೆ ಡಿ ವೆಡ್ಡಿಂಗ್ 2 ಮತ್ತು ಹನ್ಸಾಲ್ ಮೆಹ್ತಾ ಅವರ ಚಿತ್ರವನ್ನುಈಗಾಗಲೇ ಒಪ್ಪಿಕೊಂಡಿದ್ದು, ಅದನ್ನು ಮೊದಲು ಚಿತ್ರೀಕರಿಸಲಾಗುವುದು. ಈ ಎರಡು ಯೋಜನೆಗಳ ನಂತರವೇ, ರಾಮಾಯಣ ಆಧಾರಿತ ಚಿತ್ರದ ಶೂಟಿಂಗ್  ಪ್ರಾರಂಭವಾಗುತ್ತದೆ.

ಆದರೆ, ಇದುವರೆಗೂ ತಯಾರಕರು ಅಥವಾ ನಟಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.

#buttons=(Accept !) #days=(20)

Our website uses cookies to enhance your experience. Learn More
Accept !