ಡಿ ಬಾಸ್ ದರ್ಶನ್ ಪ್ರಭಾವ, ಮ್ರಗಾಲಯಗಳಿಗೆ ಕೋಟಿ ರೂಪಾಯಿ ದೇಣಿಗೆ

ಪ್ರತಿದಿನ ನಟ ನಟಿಯರ ಸುಪರ್ ಕ್ಯೂಟ್ ಫೋಟೊ ಪಡೆಯಲು ಈಗಲೇ ಇಲ್ಲಿ ಕ್ಲಿಕ್ ಮಾಡಿ

og:image

ಇತ್ತೀಚೆಗೆ ನಟ ದರ್ಶನ್ ತೂಗುದೀಪ, ಕರ್ನಾಟಕದ ಮೃಗಾಲಯ ಪ್ರಾಧಿಕಾರದ ಪರವಾಗಿ ಮಾಡಿದ ಮನವಿಯೊಂದು ರಾಜ್ಯಾದ್ಯಂತ ಮೃಗಾಲಯಗಳ ಲಕ್ ಬದಲಾಯಿಸಿದೆ. ಈಗ ನಡೆಯುತ್ತಿರುವ ಕೋವಿಡ್ ಬಿಕ್ಕಟ್ಟಿನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಮ್ರಗಾಲಯಗಳು, ಈಗ ಸಂತೋಷ ಮತ್ತು ಭರವಸೆಯೊಂದಿಗೆ ಬೀಗುತ್ತಿವೆ. ಅಧಿಕಾರಿಗಳು ಶೇರ್ ಮಾಡಿರುವ ಅಂದಾಜಿನ ಪ್ರಕಾರ ಕಳೆದ ವಾರದಲ್ಲಿ ಪ್ರಾಣಿಗಳ ದತ್ತು ಮೂಲಕ ಸಂಗ್ರಹಿಸಿದ ದೇಣಿಗೆ ಹಣ ಬರೋಬ್ಬರಿ 1 ಕೋಟಿ ರೂ.  

 ಝೂ ಅಥೋರಿಟಿ ಆಫ್ ಕರ್ನಾಟಕ, ಜುಲೈ 29, 2020 ರಿಂದ 2021 ರ ಜೂನ್ 4 ರವರೆಗೆ 17,96,700 ದೇಣಿಗೆ ಸಂಗ್ರಹಿಸಿತ್ತು, ಆದರೆ ತೂಗುದೀಪ ದರ್ಶನ್, ಜನರಲ್ಲಿ ಮನವಿ ಮಾಡಿ, ಕರ್ನಾಟಕದ ಮ್ರಗಾಲಯಗಳಲ್ಲಿರುವ ಪ್ರಾಣಿಗಳಿಗೆ ನೆರವಾಗಿ ಎಂದು ಕೋರಿದ್ದರು. ಅಂದಿನಿಂದ ಅಂದರೆ ಜೂನ್ 5 ರಿಂದ 10 ರವರೆಗೆ 1,00,47,900 ರೂಗಳನ್ನು ಸಂಗ್ರಹಿಸುವಲ್ಲಿ ಯಶಸ್ವಿಯಾಗಿದೆ.

ನೇರ ನ್ಯೂಸ್ - ಒಂದು ಸ್ವತಂತ್ರ ಮಾಧ್ಯಮವಾಗಿದ್ದು, ನಿಮ್ಮ ಧನ ಸಹಾಯದಿಂದ ಮಾತ್ರ ಈ ಸೇವೆಯನ್ನು ಮುಂದುವರೆಸಲು ಸಾಧ್ಯ. ದಯವಿಟ್ಟು ನಿಮ್ಮ ಕೈಯಲ್ಲಾದ ರೀತಿಯಲ್ಲಿ ಸಹಾಯ ಮಾಡಲು ಇಲ್ಲಿ ಕ್ಲಿಕ್ ಮಾಡಿ.