'ಪ್ರೆಗ್ನೆನ್ಸಿ ಬೈಬಲ್' - ಕರೀನಾ ಕಪೂರ್ ಮೇಲೆ ಕೇಸ್ ಜಡಿದ ಕ್ರಿಶ್ಚಿಯನ್ ಗುಂಪು

og:image

ನಟಿ ಕರೀನಾ ಕಪೂರ್ ಬರೆದ ಪುಸ್ತಕದ ಶೀರ್ಷಿಕೆಗೆ ಕ್ರಿಶ್ಚಿಯನ್ ಗುಂಪು ಆಕ್ಷೇಪ ವ್ಯಕ್ತಪಡಿಸಿದೆ ಮತ್ತು ಸಮುದಾಯದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಆರೋಪಿಸಿ ಕರೀನಾ ಸೇರಿದಂತೆ ಇನ್ನಿಬ್ಬರ ವಿರುದ್ಧ ಬುಧವಾರ ಮಹಾರಾಷ್ಟ್ರದ ಬೀಡ್ ನಗರದಲ್ಲಿ ಪೊಲೀಸ್ ದೂರು ದಾಖಲಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಸ್ತಕದ ಎರಡನೇ ಲೇಖಕನ  ವಿರುದ್ಧ ಆಲ್ಫಾ ಒಮೆಗಾ ಕ್ರಿಶ್ಚಿಯನ್ ಮಹಾಸಂಗ್ ಅಧ್ಯಕ್ಷ ಆಶಿಶ್ ಶಿಂಧೆ ಬೀಡ್‌ನ ಶಿವಾಜಿ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ದೂರಿನಲ್ಲಿ, ಕರೀನಾ ಕಪೂರ್ ಮತ್ತು ಅದಿತಿ ಶಾ ಭೀಮ್ಜಾನಿ ಬರೆದಿರುವ ಮತ್ತು ಜಗ್ಗರ್‌ನಾಟ್ ಬುಕ್ಸ್ ಪ್ರಕಟಿಸಿರುವ 'ಪ್ರೆಗ್ನೆನ್ಸಿ ಬೈಬಲ್' ಪುಸ್ತಕದ ಶೀರ್ಷಿಕೆಯನ್ನು ಶಿಂಧೆ ಉಲ್ಲೇಖಿಸಿದ್ದಾರೆ.

'ಬೈಬಲ್' ಎಂಬ ಪವಿತ್ರ ಪದವನ್ನು ಪುಸ್ತಕದ ಶೀರ್ಷಿಕೆಯಲ್ಲಿ ಬಳಸಲಾಗಿದೆ ಮತ್ತು ಇದು ಕ್ರಿಶ್ಚಿಯನ್ನರ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸಿದೆ ಎಂದು ಅವರು ಹೇಳಿದ್ದಾರೆ. ನಟಿ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 295-ಎ (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು, ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಪ್ರಕರಣವನ್ನು ನೋಂದಾಯಿಸಲು ಶಿಂಧೆ ಕೋರಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ದೂರು ಸ್ವೀಕರಿಸಿರುವುದನ್ನು ದೃಡಪಡಿಸಿದರು, ಆದರೆ ಯಾವುದೇ ಎಫ್ಐಆರ್ ದಾಖಲಿಸಲಾಗಿಲ್ಲ ಎಂದು ಹೇಳಿದರು.
Previous Post Next Post