ಶೂಟಿಂಗ್ ಸ್ಪಾಟಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕಾಣಿಸಿಕೊಂಡಿದ್ದು ಹೀಗೆ. ವಿಡಿಯೋ ನೋಡಿ

og:image

ತಮಿಳು ಚಿತ್ರರಂಗದಲ್ಲಿ ಮಿಲ್ಕಿ ಬ್ಯೂಟಿ ಅಂತಾನೇ ಫೇಮಸ್ ಆಗಿರುವ ತಮನ್ನಾ ಭಾಟಿಯಾ, ತುಂಬಾ ಪ್ರಸಿದ್ಧ ನಟಿ. ಬಾಹುಬಲಿ ಮೂಲಕ ಭಾರತದಾದ್ಯಂತ ಫೇಮಸ್ ಆಗಿದ್ದ ತಮನ್ನಾ,  ನಟನೆಯ ಜೊತೆಗೆ,   ಸ್ಟೇಜ್ ಶೋಗಳಲ್ಲಿ ಸಹ ಭಾಗವಹಿಸುತ್ತಾರೆ. ಆಷ್ಟೇ ಅಲ್ಲದೇ ಹಲವಾರು ಬ್ರಾಂಡ್‌ಗಳಿಗೆ ಮತ್ತು ಉತ್ಪನ್ನಗಳಿಗೆ ಬ್ರಾಂಡ್ ಆಂಬಾಸಿಡರ್ ಕೂಡಾ ಆಗಿದ್ದಾರೆ. 

ತಮಿಳಿನಲ್ಲಿ ಸೂಪರ್ ಸ್ಟಾರ್ ಆಗಿರುವ ತಮ್ಮನ್ನಾ ಮೊದಲಿಗೆ ಸಿನಿಮಾದಲ್ಲಿ ನಟಿಸಿದ್ದು ಹಿಂದಿಯಲ್ಲಿ.  ತಮ್ಮ 15 ನೇ ವಯಸ್ಸಿನಲ್ಲಿ ಹಿಂದಿ ಚಲನಚಿತ್ರ ಚಂದ್ ಸಾ ರೋಶನ್ ಮೂಲಕ ಚಲನಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿರುವ ತಮನ್ನಾ ಹಲವಾರು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 

ಯಶಸ್ವಿ ತಮಿಳು ಚಿತ್ರಗಳಾದ ಅಯಾನ್ (2009), ಪಯಾ (2010), ಸಿರುಥೈ (2011), ವೀರಂ (2014), ಧರ್ಮ ದುರೈ (2016), ದೇವಿ (2016), ಸ್ಕೆಚ್ (2018) ಮತ್ತು ಅವರ ತೆಲುಗು ಚಲನಚಿತ್ರಗಳು 100% ಸೇರಿವೆ ಲವ್ (2011), ಓಸರವೆಲ್ಲಿ (2011), ರಾಚಾ (2012), ತಡಕಾ (2013), ಬಾಹುಬಲಿ: ದಿ ಬಿಗಿನಿಂಗ್ (2015), ಬಂಗಾಳ ಟೈಗರ್ (2015), ಒಪಿರಿ (2016), ಬಾಹುಬಲಿ 2 (2017), ಎಫ್ 2 (2019), ಮತ್ತು ಸೈ ರಾ ನರಸಿಂಹ ರೆಡ್ಡಿ (2019) ಮುಂತಾದ ಸುಪರ್ ಹಿಟ್ ಚಿತ್ರಗಳ ನಾಯಕಿ ತಮನ್ನಾ. 

ಯಾವುದೇ ಹಮ್ಮು ಬಿಮ್ಮು ಇಲ್ಲದೇ ಮಾಧ್ಯಮಗಳ ಮುಂದೆ ಕಂಡುಬರುವ ತಮನ್ನಾ, ಇತ್ತೀಚೆಗೆ ಐಪಿಎಲ್ ಶೂಟಿಂಗ್ ಸಮಯದಲ್ಲಿ ಪಿಲಂ ಸಿಟಿಗೆ ಬಂದಿದ್ದು, ಮಾಧ್ಯಮಗಳ ಕಣ್ಣಿಗೆ ಸಕ್ಕತ್ ಹಾಟ್ ಆಗಿ ಕಂಡುಬಂದಿದ್ದಾರೆ. ಈ ವಿಡಿಯೋ ನೋಡಿ. 

 
Previous Post Next Post