ಮಂಗಳೂರು ಸ್ಪೆಷಲ್ ಗೋಲಿ ಬಜೆ (ಮಂಗಳೂರು ಬಜ್ಜಿ) ಮಾಡುವ ವಿಧಾನ

og:image

ಮಳೆಗಾಲ ಬಂದ ಮೇಲೆ ಜನರಿಗೆ ತಿನ್ನೋಕೆ ಏನಾದರೂ ಬೇಕೇ ಬೇಕು. ಬೆಂಗಳೂರಿನಲ್ಲಿ ಬಜ್ಜಿ ಬೋಂಡಗಳ ಭರ್ಜರಿ ಮಾರಟ ಆಗುತ್ತಿರುವ ಈ ಸಮಯದಲ್ಲಿ ಮಂಗಳೂರಿನ ಪ್ರಸಿದ್ಧ ತಿಂಡಿ ಗೋಲಿ ಬಜೆ ಹೇಗೆ ಮಾಡೋದು ನೋಡೊಣ ಬನ್ನಿ. 

ಗೋಲಿಬಜೆ ಚಟ್ನಿ ಜೊತೆ ತಿನ್ನಲು ಚೆನ್ನಾಗಿರುತ್ತೆ. ಚಟ್ನಿ ಇಲ್ಲದೇ ಹಾಗೇನೆ ತಿನ್ನಬಹುದು. ಇನ್ನು ಗೋಲಿ ಬಜೆ ಮೈದಾದಿಂದ ಮಾಡುವುದರಿಂದ ಆರೋಗ್ಯಕ್ಕೆ ಅಷ್ಟೊಂದು ಒಳ್ಳೆಯದಲ್ಲದಿದ್ದರೂ, ಮಳೆಗಾಲದಲ್ಲಿ ಒಂದು ಪ್ಲೇಟ್ ತಿನ್ನಲು ಅಡ್ಡಿಯೇನಿಲ್ಲ.

ಗೋಲಿ ಬಜೆ ಮಂಗಳೂರಿನಲ್ಲಿ ಜಾಸ್ತಿ ಹೋಟೆಲುಗಳಲ್ಲಿ ಲಭ್ಯವಿರುವುದರಿಂದ ಅದು ಅಲ್ಲಿನ ಅಧಿಕೃತ ತಿಂಡಿ ಎಂದೇ ಹೇಳಬಹುದು. ಗೋಲಿ ಬಜೆ  ಅಧಿಕೃತ ಹೆಸರು ಆದರೆ ಇದನ್ನು ಮೈಸೂರು ಬೋಂಡಾ ಮತ್ತು ಮಂಗಳೂರು ಬಜ್ಜಿಯಂತಹ ಇತರ ಹೆಸರುಗಳಲ್ಲಿ ಕರೆಯಲಾಗುತ್ತದೆ. 


Previous Post Next Post