"ನೀರಜ್ ಚೋಪ್ರಗೆ ಶುಭ ಕೋರಿದ ನದೀಮ್ ಫೇಕ್ ಐಡಿ" - ಬಕ್ರ ಆದ ಹಲವಾರು ಮಾಧ್ಯಮಗಳು

og:image

ಆಗಸ್ಟ್ 7, ಶನಿವಾರ, ನೀರಜ್ ಚೋಪ್ರಾ ಪುರುಷರ ಜಾವೆಲಿನ್ ಫೈನಲ್ ಗೆಲ್ಲಲು ಅದ್ಭುತ ಪ್ರದರ್ಶನ ನೀಡಿದ ನಂತರ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತವು ತನ್ನ ಮೊದಲ ಚಿನ್ನದ ಪದಕವನ್ನು ಗೆದ್ದಿದೆ. ಇದನ್ನೂ ಓದಿ ; ನೀರಜ್ ಚೋಪ್ರರನ್ನು ಸಂಘಿ ಎಂದು ಬಣ್ಣಿಸಿದ ಬಲಪಂಥಿಯರು - ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಕೆಂಡಾಮಂಡಲ 

ಆದರೆ ದೊಡ್ಡ ವಿಜಯದ ನಂತರ, ಪಾಕಿಸ್ತಾನದ ಕ್ರೀಡಾಪಟು ಅರ್ಷದ್ ನದೀಮ್ ಹೆಸರಿನಲ್ಲಿ  ಚೋಪ್ರಾ ಅವರನ್ನು ಅಭಿನಂದಿಸಿರುವ ಒಂದು ಟ್ವೀಟ್ ಸೋಷಿಯಲ್ ಮಿಡಿಯಾದಲ್ಲಿ ಹಂಚಲ್ಪಡುತ್ತಿದೆ. ನದೀಮ್ ಅವರು ಚೋಪ್ರಾ ಜೊತೆ ಸ್ಪರ್ಧಿಸಿದ್ದು ಮತ್ತು ಅವರು ಸ್ಪರ್ಧೆಯಲ್ಲಿ ಐದನೇ ಸ್ಥಾನ ಪಡೆದರು. ಇದನ್ನೂ ಓದಿ ; ನೀರಜ್ ಚೋಪ್ರರನ್ನು ಸಂಘಿ ಎಂದು ಬಣ್ಣಿಸಿದ ಬಲಪಂಥಿಯರು - ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಕೆಂಡಾಮಂಡಲ

ಈ ಟ್ವೀಟ್ ಅನ್ನು ನಂತರ ಟೈಮ್ಸ್ ನೌ, NDTV ಹಿಂದಿ, ಲೋಕಸತ್ತಾ, ಲೈವ್ ಹಿಂದೂಸ್ತಾನ್ ಸೇರಿದಂತೆ ಹಲವಾರು ಸುದ್ದಿವಾಹಿನಿಗಳು ಪಾಕಿಸ್ತಾನದ ಆಟಗಾರನ ಸೌಹಾರ್ದ ಎಂದೂ ಶೇರ್ ಮಾಡಲು ಆರಂಭಿಸಿದವು. 



ಆದರೆ, ಸತ್ಯ ಶೋಧನೆ ಮಾಡಿರುವ ಕೆಲವು ವೆಬ್ಸೈಟ್ಗಳು, ಈ ಖಾತೆ ಅಸಲಿಯಲ್ಲ, ನಕಲಿ ಎಂದು ಪತ್ತೆಮಾಡಿದೆ. ಈ ಹಿಂದೆ ಸಯೀದ್ ಅನ್ವರ್ ಎಂಬ ಹೆಸರಿನ ಈ ಖಾತೆ ಇದೀಗ ನದೀಮ್ ಎಂದು ಹೆಸರು ಬದಲಿಸಿದೆ. ಇದನ್ನೂ ಓದಿ ; ನೀರಜ್ ಚೋಪ್ರರನ್ನು ಸಂಘಿ ಎಂದು ಬಣ್ಣಿಸಿದ ಬಲಪಂಥಿಯರು - ಟ್ವಿಟ್ಟರ್ನಲ್ಲಿ ಅಭಿಮಾನಿಗಳು ಕೆಂಡಾಮಂಡಲ

Previous Post Next Post