ರಶ್ಮಿಕಾ ಮಂದಣ್ಣ ಜೊತೆ ಮದುವೆ ಸುದ್ದಿಗೆ ನಾನ್ಸೆನ್ಸ್ ಎಂದ ವಿಜಯ್ ದೇವರಕೊಂಡ???

og:image

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಸಂಬಂಧದಲ್ಲಿದ್ದಾರೆ ಎಂದು ಹಲವಾರು ಬಾರಿ ವರದಿಯಾಗಿದೆ. ಇತ್ತೀಚೆಗಷ್ಟೇ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಕೂಡಾ ಹರಿದಾಡುತ್ತಿತ್ತು, ಆದರೆ ಈಗ, ದೇವರಕೊಂಡ, ಟ್ವೀಟ್ ಮಾಡಿ, ಮದುವೆ ಸುದ್ಧಿ ಎಂದಿನಂತೆ ಅಸಂಬದ್ಧ. ಇದನ್ನು ದೊಡ್ಡ ಸುದ್ದಿ ಮಾಡಬೇಡಿ!" ಎಂದು ಟ್ವೀಟ್ ಮಾಡಿ,  ಅವರು ಯಾವುದೇ ನಿರ್ದಿಷ್ಟ ಸುದ್ದಿಯನ್ನು ಉಲ್ಲೇಖಿಸದಿದ್ದರೂ, ಅವರು ತಮ್ಮ ಮದುವೆಯ ವದಂತಿಗಳ ಬಗ್ಗೆ ಮಾತನಾಡುತ್ತಿದ್ದಾರೆಂದು ಎನ್ನಲಾಗಿದೆ.

ಏತನ್ಮಧ್ಯೆ, ಇತ್ತೀಚೆಗೆ ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಮದುವೆ ಮತ್ತು ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಒಬ್ಬರಿಗೊಬ್ಬರು ಗೌರವ, ಸಮಯವನ್ನು ನೀಡಿದಾಗ ಮತ್ತು ನೀವು ಸುರಕ್ಷಿತವಾಗಿದ್ದೀರಿ ಎಂಬ ಭಾವನೆ ಬಂದರೆ ಮಾತ್ರ ಅದು ಪ್ರೀತಿ ಎಂದು ಅವರು ಹೇಳಿದರು. ಪ್ರೀತಿಯನ್ನು ವಿವರಿಸುವುದು ಕಷ್ಟ, ಏಕೆಂದರೆ ಅದು ಭಾವನೆಗಳಿಗೆ ಸಂಬಂಧಿಸಿದೆ ಎಂದು ಅವರು ಹೇಳಿದರು. "ಪ್ರೀತಿಯು ಎರಡು ಕಡೆಯಲ್ಲೂ ಇದ್ದಾಗ ಮಾತ್ರ ಕೆಲಸ ಮಾಡುತ್ತದೆ." ಎಂದು ನಟಿ ಹೇಳಿದರು. 

ತೆಲುಗು ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಒಟ್ಟಿಗೆ ಅಭಿನಯಿಸಿದ್ದವರು. ಮೊದಲ ಬಾರಿಗೆ ಇವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ತೆಲುಗಿನ ‘ಗೀತ ಗೋವಿಂದಂ’ ಸಿನಿಮಾದಲ್ಲಿ. ‘ಗೀತ ಗೋವಿಂದಂ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಬಳಿಕ ‘ಡಿಯರ್ ಕಾಮ್ರೇಡ್’ ಸಿನಿಮಾದಲ್ಲೂ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಜೋಡಿಯಾಗಿ ಮಿಂಚಿದ್ದರು.
Previous Post Next Post