RJ Rachana Death- ಮಾತು ನಿಲ್ಲಿಸಿದ ಮಾತಿನ ಮಲ್ಲಿ, ಆರ್​​.ಜೆ. ರಚನಾ ಕೊನೆಯುಸಿರು!!

og:image

ಮಾತಿನ ಮಲ್ಲಿ, ಪಟ ಪಟ ಅಂತ ಮಾತನಾಡುತ್ತಿದ್ದ ಆರ್​​.ಜೆ. ರಚನಾ(R.J Rachana) ಕೊನೆಯುಸಿರೆಳೆದಿದ್ದಾರೆ. ಸುಮಾರು 39 ವರ್ಷದ ಆರ್​.ಜೆ ರಚನಾ ಹೃದಯಾಘಾತ(Hear Attack)ದಿಂದ ಅಸುನಿಗಿದ್ದಾರೆ. ರೆಡಿಯೋ ಮಿರ್ಚಿ(Radio Mirchi)ಯಲ್ಲಿ ಹಲವಾರು ವರ್ಷ ರೆಡಿಯೋ ಜಾಕಿ(Radio Jockey)ಯಾಗಿ ರಚನಾ ಕೆಲಸ ಮಾಡಿದ್ದರು.

ರೇಡಿಯೋ ಜಾಕಿಯಾಗಿ ಹೆಸರು ಮಾಡಿದ್ದ ಹುಡುಗಿ ರಚನಾ. ರೇಡಿಯೋ ಕಾರ್ಯಕ್ರಮಗಳ ಜೊತೆಗೆ ಸಿನಿಮಾ ಕಾರ್ಯಕ್ರಮಗಳನ್ನು ಕೂಡಾ ನಿರೂಪಣೆ ಮಾಡುತ್ತಿದ್ದರು. ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ರಕ್ಷಿತ್ ತಂಗಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಂದು ಹೃದಯ ಸ್ತಂಭನಕ್ಕೆ ಒಳಗಾಗಿ ಪ್ರಾಣ ಚೆಲ್ಲಿದ್ದಾರೆ. ಜೆ.ಪಿ. ನಗರದ ತಮ್ಮ ಮನೆಯಲ್ಲಿದ್ದಾಗ ಎದೆನೋವು ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯದಲ್ಲೇ ಉಸಿರು ನಿಂತಿದೆ. ಕಳೆದ ನಾಲ್ಕೈದು ವರ್ಷಗಳಿಂದ ರೇಡಿಯೋ ಕೆಲಸದಿಂದ ದೂರ ಉಳಿದಿದ್ದರು. ಈಕೆಯ ಪೋಷಕರು ಚಾಮರಾಜಪೇಟೆಯಲ್ಲಿ ವಾಸವಿದ್ದಾರೆ. ರಚನಾ ಜೆ.ಪಿ. ನಗರದಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಖಿನ್ನತೆಗೂ ಒಳಗಾಗಿದ್ದರು ಎನ್ನಲಾಗುತ್ತಿದೆ. ಅವೆಲ್ಲ ಏನೇ ಆಗಲಿ, ಬದುಕಿ ಬಾಳಬೇಕಿದ್ದ ಮೂವತ್ತೊಂಬತ್ತರ ರಚನಾ ಇಲ್ಲವಾಗಿರೋದು ಮಾತ್ರ ದುಃಖದ ಸಂಗತಿ.
RJ Rachana Death- Radio Mirchi Rachana died due to heart attack
Previous Post Next Post