ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಆರವ್, ನಿಮ್ಮ ಸಹಾಯ ಒಂದು ಪ್ರಾಣ ಉಳಿಸಬಹುದು!


ದಯವಿಟ್ಟು ಈ ನ್ಯೂಸ್ ಶೇರ್ ಮಾಡಿ, ಹಲವಾರು ದಾನಿಗಳಿಗೆ ನ್ಯೂಸ್ ಹಂಚುವ ಮೂಲಕ ಈ ಮಗುವಿಗೆ ಸಹಾಯ ಮಾಡುವಲ್ಲಿ ನೀವು ಸಹಕರಿಸಿ. ದಯವಿಟ್ಟು ಫೇಸ್ಭುಕ್ ವಾಟ್ಸಪ್ ಮೂಲಕ ಶೇರ್ ಮಾಡಿ.

ಕರೋಲಿ ರೋಗ, ಒಂದು ಅಪರೂಪದ ಅನುವಂಶಿಕ ಕಾಯಿಲೆ. ಅನುವಂಶಿಕ ಕಾಯಿಲೆ ಕಾಯಿಲೆ ಎಂದರೆ, ವಂಶ ಪಾರಂಪರ್ಯವಾಗಿ ತಂದೆ ತಾಯಿಯಿಂದ ಮಕ್ಕಳಿಗೆ ಬರುವ ಕಾಯಿಲೆಯಾಗಿದೆ. 


ದಕ್ಷಿಣ ಕನ್ನಡ ಜಿಲ್ಲೆಯ ಸಂತೋಷ್ ಮತ್ತು ಭವ್ಯರ ಮಗನಾದ ಆರವ್, ಈ ಅಪರೂಪದ ಕರೋಲಿ ರೋಗದಿಂದ ಬಳಲುತ್ತಿದ್ದು, ಇದೀಗ ಚಿಕಿತ್ಸೆ ಪಡೆಯುತ್ತಿದ್ದಾನೆ.  ಆರವ್-ನ ಈ ಕಾಯಿಲೆರಯಿಂದಾಗಿ ಯಕೃತ್ತಿನ ವೈಫಲ್ಯ ಮತ್ತು ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆಗೆ ಕಾರಣವಾಗಬಹುದು.ಮಾಸ್ಟರ್ ಆರವ್, ಪ್ರಸ್ತುತ ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು ಇಲ್ಲಿನ ಮಜುಂದಾರ್ ಶಾ ವೈದ್ಯಕೀಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ಆರವ್ ಪೋಷಕರು ಬಡವರಾಗಿದ್ದು, ದುಡಿಯುವ ಹಣವೆಲ್ಲಾ ಕುಟುಂಬದ ನಿರ್ವಹಣೆಗೆ ಖರ್ಚಾಗುತ್ತಿದೆ. 

ಚಿಕಿತ್ಸೆಗೆ ಅಗತ್ಯವಿರುವ ಒಟ್ಟು ಮೊತ್ತವನ್ನು ಸಂಗ್ರಹಿಸಲು ಕುಟುಂಬವು ಎಲ್ಲಾ ರೀತಿಯಲ್ಲಿ ಪ್ರಯತ್ನ ಮಾಡಿದೆ. ಆದರೆ ವೈದ್ಯರ ಪ್ರಕಾರ, ಮಗನ ಚಿಕಿತ್ಸೆಗೆ ಪ್ರತೀ ಮೂರು ತಿಂಗಳಿಗೆ ಮೂವತ್ತು ಸಾವಿರ ರೂಪಾಯಿ ಖರ್ಚು ಬರಲಿದೆ. ಇದರ ಜೊತೆಗೆ  ಯಕೃತ್ತಿನ ವೈಫಲ್ಯದ ಸಂಧರ್ಭದಲ್ಲಿ ಯಕೃತ್ತು ಕಸಿ ಮಾಡುವ ಅನಿವಾರ್ಯತೆ ಇದ್ದು, ಅದಕ್ಕಾಗಿ ಇಪ್ಪತ್ತರಿಂದ ಮೂವತ್ತು ಲಕ್ಷದವರೆಗೆ ಹಣಕಾಸಿನ ಅಗತ್ಯ ಇರಲಿದೆ. 

ಅಗತ್ಯವಿರುವ ಮೊತ್ತವು ದೊಡ್ಡದಾಗಿರುವುದರಿಂದ, ಈ ಅಗತ್ಯದ ಸಮಯದಲ್ಲಿ ಚಿಕಿತ್ಸೆ ಮತ್ತು ಸಹಾಯಕ್ಕಾಗಿ ಆರವ್-ನ ಪೋಷಕರು ಧನ ಸಹಾಯಕ್ಕಾಗಿ ಜನರ ಬಳಿ ನೆರವು ಕೋರಿದ್ದಾರೆ. 


ಈ ಲಿಂಕನ್ನು ಕ್ಲಿಕ್ ಮಾಡುವ ಮೂಲಕ ಆರವ್-ನ ಚಿಕಿತ್ಸೆಗಾಗಿ ನೆರವು ನೀಡಬಹುದು. ನಿಮ್ಮ ಒಂದು ಸಣ್ಣ ನೆರವಿನಿಂದ ಒಂದು ಮಗುವಿನ ಪ್ರಾಣ ಉಳಿಸಬಹುದು. 


ಗೂಗಲ್ ಪೇ : 81975 01838 (ಭವ್ಯ)


ಬ್ಯಾಂಕ್ ಅಕೌಂಟ್ ವಿವರ: 

1346166000008237

IFSC Code:- KVBL0001346, 

KARUR VYSYA BANK, 

BANGALORE KENGERI


ಈ ಲಿಂಕ್ ಮೂಲಕವೂ ನೀವು ಸಹಾಯ ಮಾಡಬಹುದು : 

https://www.ketto.org/fundraiser/aaravದಯವಿಟ್ಟು ಈ ನ್ಯೂಸನ್ನು ಶೇರ್ ಮಾಡಿ, ಆರವ್ ಗೆ ಸಹಾಯಮಾಡಿ. ದಯವಿಟ್ಟು ಈ ನ್ಯೂಸ್ ಶೇರ್ ಮಾಡಿ, ಹಲವಾರು ದಾನಿಗಳಿಗೆ ನ್ಯೂಸ್ ಹಂಚುವ ಮೂಲಕ ಈ ಮಗುವಿಗೆ ಸಹಾಯ ಮಾಡುವಲ್ಲಿ ನೀವು ಸಹಕರಿಸಿ. ದಯವಿಟ್ಟು ಫೇಸ್ಭುಕ್ ವಾಟ್ಸಪ್ ಮೂಲಕ ಶೇರ್ ಮಾಡಿ.

Previous Post Next Post