"ಕಾಂತಾರ ಚಿತ್ರಕ್ಕೆ ತುಳುವಿನಲ್ಲೂ ನೀವೇ ಡಬ್ ಮಾಡಿ ಸಾರ್" ರಿಷಬ್ ಗೆ ಕರಾವಳಿಗರ ಬೇಡಿಕೆ

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

og:image

ರಿಷಬ್ ಶೆಟ್ಟಿ ಅವರ ಇತ್ತೀಚಿನ ಕಾಂತಾರ ಬಿಡುಗಡೆಯಾದಾಗಿನಿಂದ ತುಂಬಾ ಕಾರ್ಯನಿರತ ವ್ಯಕ್ತಿಯಾಗಿದ್ದಾರೆ, ಇದು ಗಲ್ಲಾಪೆಟ್ಟಿಗೆಯನ್ನು ಕೊಳ್ಳೆಹೊಡೆಯೋದನ್ನು ಮುಂದುವರೆಸಿದೆ. ಕನ್ನಡ ಚಲನಚಿತ್ರವು ಚಲನಚಿತ್ರ ಮಂದಿರಗಳಲ್ಲಿ ಎರಡು ವಾರಗಳಿಗೆ ಹತ್ತಿರವಾಗುತ್ತಿದ್ದಂತೆ, ಪ್ರೇಕ್ಷಕರಿಗೆ ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ಬಿಂಗ್ ಆವೃತ್ತಿಗಳು ಗೆಲುವಿನ ನಾಗಾಲೋಟ ನಡೆಸುತ್ತಿದೆ. . ಅಕ್ಟೋಬರ್ 14 ರಂದು, ಹಿಂದಿ ಆವೃತ್ತಿಯು ಅಕ್ಟೋಬರ್ 15 ರಂದು ತೆಲುಗು ಮತ್ತು ಅಕ್ಟೋಬರ್ 16 ರಂದು ತಮಿಳು ಬಿಡುಗಡೆಯಾಗಿದೆ.

ಇವೆಲ್ಲದರ ನಡುವೆ ಕಾಂತಾರ ತುಳುವಿನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ಧಿ ಕರವಾಳಿಗರಲ್ಲಿ ಸಂಚಲನ ಮೂಡಿಸಿದೆ. ಕಾಂತಾರ ಕರಾವಳಿ ಮೂಲದ ಕಥೆಯಾಗಿದ್ದು, ತುಳುವಿನಲ್ಲಿ ನೋಡಲು ಕಾತುರದಿಂದ ಕಾಯುತ್ತಾ ಇದ್ದಾರೆ. 

ಕಾಂತಾರ ಚಿತ್ರಕ್ಕೆ ತುಳು ನಟರೇ ಡಬ್ಬಿಂಡ್ ಮಾಡುತ್ತಿದ್ದು, ಇನ್ನು ರಿಷಬ್ ಪಾತ್ರಕ್ಕೆ ಕೂಡಾ ತುಳು ನಟರೇ ಡಬ್ಬಿಂಡ್ ಮಾಡುತ್ತಿದ್ದಾರೆ. 
ಆದರೆ ಇದು ತುಳು ಚಿತ್ರ ಪ್ರೇಮಿಗಳಿಗೆ ಬೇಸರ ತರಿಸಿದೆ. ರಿಷಬ್ ಕುಂದಾಪುರದವರಾದ್ದರಿಂದ ಸ್ವಲ್ಪ ಕಷ್ಟ ಪಟ್ಟರೆ ತುಳು ಭಾಷೆಯಲ್ಲೂ ಕೂಡಾ ಡಬ್ಬಿಂಡ್ ಮಾಡಬಹುದಿತ್ತು ಎಂದು ಪೋಸ್ಟ್ ಮಾಡಿ ತಮ್ಮ ಅಸಮಾಧಾನ ತೋರಿಸುತ್ತಿದ್ದಾರೆ. 
ಕಾಂತಾರ ಕರಾವಳಿಗರು ನಂಬಿಕೊಂಡಂತರ ದೈವ ದೇವರ ಚಿತ್ರವಾಗಿರುವುದರಿಂದ ರಿಷಬ್ ಮೇಲೆ ತುಳುವರು ಇನ್ನಿಲ್ಲದ ಪ್ರೀತಿ ತೋರಿಸುತ್ತಿದ್ದಾರೆ. ಅದರಿಂದ ಆ ಚಿತ್ರಕ್ಕೆ ರಿಷಬ್ ಡಬ್ಬಿಂಡ್ ಮಾಡಿದ್ದರೆ ಚೆನ್ನಾಗಿತ್ತು ಎಂದು ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 

ಅದೇನೇ ಇದ್ದರೂ  ಕಾಂತಾರ ಈಗಾಗಲೇ ಜನರ ಪ್ರೀತಿ ಗೆದ್ದಿದೆ. ಇನ್ನು ತುಳುವಿನಲ್ಲೂ ಸೂಪರ್ ಹಿಟ್ ಆಗುವುದು ಖಂಡಿತ. 
Kantara Tulu Dubbing - Rishab Shetty Kantara new kannada movie Hindi dubbing, tamil, malayalam, telugu Rishab shetty dubbing demand for dubbing 

ಕನ್ನಡದ ಹೊಚ್ಚ ಹೊಸ ನ್ಯೂಸ್ ಚಾನೆಲ್ ನೇರ ನ್ಯೂಸ್, ನಿಮಗಾಗಿ ಪ್ರತಿದಿನ ಹೊಸ ಹೊಸ ವಿಷಯಗಳನ್ನು ನಿಮ್ಮ ಮುಂದೆ ತರುತ್ತದೆ. ಇದನ್ನು ನಿಮ್ಮ ಮೊಬೈಲ್ನಲ್ಲಿ ಪಡೆಯಲು ಇಲ್ಲಿ ಕೆಳಗಿರುವ ಫಾಲೋ ಬಟನ್ ಪ್ರೆಸ್ ಮಾಡಿ.

English Summary: - Nera News - Kannada breaking news fastest growing online News website delivers the Top News, Cinema News, Sports, Cricket, Karnataka, Politics, Photo Gallery, and Videos in Kannada Live news Channel, Kannada breaking news

Latest Kannada Breaking News