ನಾನು ಬಿಗ್ ಬಾಸ್ ಶೋನಲ್ಲಿ ನಡೆಯುವುದೆಲ್ಲಾ ನಾಟಕ ಅಂದುಕೊಂಡಿದ್ದೆ!!! ರೂಪೇಶ್ ಶೆಟ್ಟಿ

og:image

"ನಾನು ಬಿಗ್ ಬಾಸ್ ಶೋನಲ್ಲಿ ನಡೆಯುವುದೆಲ್ಲಾ ನಾಟಕ ಅಂದುಕೊಂಡಿದ್ದೆ, ಬಿಗ್ ಬಾಸ್ ಶೋ ನಲ್ಲಿ ಊಟಕ್ಕೆ ಏನು ತೊಂದರೆ ಇರೋಲ್ಲ, ಪಾರ್ಸೆಲ್ ಬರುತ್ತೆ , ಕಂಟೆಸ್ಟಂಟ್ಸ್ ಅಡುಗೆ ಮಾಡೋದು ಡ್ರಾಮಾ ಅಂದುಕೊಂಡಿದ್ದೆ" ಹೀಗಂತ ಹೇಳಿದ್ದು, ಬೇರೆ ಯಾರೂ ಅಲ್ಲ, ಈ ಬಾರಿ ಬಿಗ್ಗ್ ಬಾಸ್ ಸ್ಪರ್ಧೆಯಲ್ಲಿ ವಿಜೇತರಾದ ಕರಾವಳಿ ಹೀರೊ ರೂಪೇಶ್ ಶೆಟ್ಟಿ. 

ಹೌದು, ಇತ್ತೀಚಿಗೆ ದುಬೈ ಪ್ರವಾಸದಲ್ಲಿರುವ ರೂಪೇಶ್ ಶೆಟ್ಟಿಯವರ ಜೊತೆ ಮಾತುಕತೆಯಲ್ಲಿ ತೊಡಗಿದ್ದಾಗ, ತುಳು, ಕನ್ನಡದಲ್ಲಿ ಹಾಸ್ಯ ನಟನಾಗಿ ಅಭಿನಯಿಸಿರುವ ದೀಪಕ್ ಪಾಲಡ್ಕ, ಬಿಗ್ ಬಾಸ್ ವಿನ್ನರ್ ಜೊತೆ ಮಾತುಕತೆ ನಡೆಸಿದಾಗ ಈ ಪ್ರಶ್ನೆ ಬಂತು. "ನನ್ನ ಅಮ್ಮ ಬಿಗ್ಗ್ ಬಾಸ್ ನಲ್ಲಿ ನಿಮ್ಮನ ತುಂಬಾ ಮೆಚ್ಚಿಕೊಂಡಿದ್ದರು, ನೀವು ಗೆದ್ದು ಬರಲಿ ಎಂದು ಪ್ರತಿದಿನ ಪ್ರಾರ್ಥಿಸುತ್ತಿದ್ದರು.  ಆದರೆ ನನಗೆ ಮೊದಲಿನಿಂದಲೂ ಒಂದು ಅನುಮಾನ ಇತ್ತು, ಬಿಗ್ಗ್ ಬಾಸ್ ಸ್ಕ್ರಿಪ್ಟ್ ಇಟ್ಟುಕೊಂಡು ಮಾಡಿರುವ ಕಾರ್ಯಕ್ರಮ, ಎಲ್ಲರೂ ಸುಮ್ಮನೆ ನಾಟಕ ಮಾಡ್ತಾರೆ ಅಂತಾರೆ, ಇದು ನಿಜವೇ" ಎಂದು ಶೆಟ್ಟರನ್ನು ಪ್ರಶ್ನಿಸಿದರು. 
   

ರೂಪೇಶ್ ಶೆಟ್ಟಿ ಇದಕ್ಕೆ ಉತ್ತರಿಸಿ, "ಮೊದಲೆಲ್ಲ ನಾನು ಇದೊಂದು ಸ್ಕ್ರಿಪ್ಟ್ ಮಾಡಿರೋ ಕಾರ್ಯಕ್ರಮ ಅಂದು ಕೊಂಡಿದ್ದೆ. ಪ್ರತಿದಿನ ಜಗಳ ಆಡ್ತಾರೆ, ಆಮೇಲೆ ಅಡುಗೆ ಮಾಡೋ ತರ ನಾಟಕ ಆಡ್ತಾರೆ, ಏನಿಲ್ಲಾ ಅಂದರೂ ಊಟಕ್ಕೆ ತೊಂದರೆ ಇರೋಲ್ಲ ಅಂದು ಕೊಂಡಿದ್ದೆ. ಆದರೆ, ನನ್ನನ್ನ ನಂಬಿ, ಅಲ್ಲಿ ಎಲ್ಲ ನಡೆಯೋದು ಒರಿಜಿನಲ್. ಮನೆ ಒಳ್ಗೆ ಕಣ್ಣು ಕಟ್ಟಿ ಬಿಟ್ಟ ಮೇಲೆ ನಮಗೆ ಹೊರಗೆ ಜಗತ್ತಿನ ಕನೆಕ್ಷನ್ ಇರೋಲ್ಲ." ಎಂದು ಉತ್ತರಿಸಿದರು. 


Previous Post Next Post